ಕನ್ನಡಿಗ | Chief Minister, Karnataka | Congressman

ಕರ್ನಾಟಕ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖಾಂಶಗಳು.
3
4
48
2,957
ಲಕ್ಷೋಪಲಕ್ಷ ದೀಪಗಳ ಬೆಳಕಿನಲ್ಲಿ ಕಂಗೊಳಿಸುವ ಅರಮನೆ, ಆನೆಮೇಳದ ನಡುವೆ ಸಾಗುವ ಚಿನ್ನದ ಅಂಬಾರಿಯ ರಾಜಗಾಂಭೀರ್ಯ ಹಾಗೂ ನಾಡದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ವೈಭವದ ದರ್ಶನವೇ ಈ ಹಬ್ಬದ ಪರಮ ಸೌಭಾಗ್ಯ. ಈ ವರ್ಷದ ಐತಿಹಾಸಿಕ ದಸರಾ ಮಹೋತ್ಸವವು ಅತ್ಯಂತ ವಿಶಿಷ್ಟವಾಗಿದೆ. ನಾಡಿನೆಲ್ಲೆಡೆ ಜ್ಞಾನ ಮತ್ತು ಅನ್ನದಾಸೋಹದ ಬೆಳಕನ್ನು ಪಸರಿಸುತ್ತಿರುವ ಕಾಯಕಯೋಗಿ, ಕೊಪ್ಪಳ ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳವರ ಅಮೃತ ಹಸ್ತದಿಂದ ಈ ಬಾರಿಯ ದಸರಾ ಉದ್ಘಾಟನೆಗೊಳ್ಳಲಿದೆ. ಸಂತ ಪರಂಪರೆ ಮತ್ತು ನಾಡಿನ ಸಾಂಸ್ಕೃತಿಕ ಪರಂಪರೆಯ ಈ ಸುಂದರ ಸಮ್ಮಿಲನವು ನಮ್ಮ ನಾಡಹಬ್ಬದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.
7
35
267
5,817
A special evening at the Kanteerava Stadium, witnessing the Blue Tigers take on Panama in an international football friendly, along with MLA, KSFA President, AIFF Vice President and SAFF Vice President Shri @mlanaharis, Indian football legend and former captain Shri @chetrisunil11 Namma Bengaluru has always shared a special bond with football, and it is wonderful to see our national team back at the Kanteerava Stadium after their memorable 2023 SAFF Championship triumph. Wishing Team India the very best as they continue to carry the hopes and dreams of millions of Indians on the international stage.
9
11
228
7,131
ಪೌರಕಾರ್ಮಿಕರ ಶ್ರಮಕ್ಕೆ ಗೌರವ, ಅವರ ಬದುಕಿಗೆ ಭದ್ರತೆ ಹಾಗೂ ಮಕ್ಕಳ ಭವಿಷ್ಯಕ್ಕೆ ಭರವಸೆ ನೀಡುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಘೋಷಿಸಿದ್ದೇವೆ. ನೇರ ಪಾವತಿ ಪೌರಕಾರ್ಮಿಕರಿಗೆ ಹೊಸದಾಗಿ ಪ್ರತಿ ತಿಂಗಳು ₹5,000 ವಿಶೇಷ ಭತ್ಯೆ, ಬೆಳಗಿನ ಉಪಹಾರ ಭತ್ಯೆ ₹35ರಿಂದ ₹70ಕ್ಕೆ ಹೆಚ್ಚಳ ಹಾಗೂ ಖಾಯಂ ಪೌರಕಾರ್ಮಿಕರಿಗೆ ನೀಡುವ ವಿಶೇಷ ಭತ್ಯೆ ₹7,000ರಿಂದ ₹10,000ಕ್ಕೆ ಹೆಚ್ಚಿಸುವುದರ ಜೊತೆಗೆ ಪೌರಕಾರ್ಮಿಕರ ಮಕ್ಕಳಿಗಾಗಿ ಕೆಪಿಎಸ್‌ ಮಾದರಿಯಲ್ಲಿ ವಸತಿ ಶಾಲೆ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಈ ಮೂಲಕ ಪೌರಕಾರ್ಮಿಕರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.
3
8
43
3,445
ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ, ಮೂವರು ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಉಷಾರಾಣಿ, ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಕುರುಬ ಶಾಂತಪ್ಪ ಭರತ್ ಕುಮಾರ್ ಮತ್ತು ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ನೇರಳೆ ವೀರಭದ್ರಯ್ಯ ಭವಾನಿ ಅವರಿಗೆ, ರಾಜ್ಯಪಾಲರಾದ ಶ್ರೀ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಎಲ್ಲ ನೂತನ ಹೆಚ್ಚುವರಿ ನ್ಯಾಯಮೂರ್ತಿಗಳಿಗೆ ಶುಭಹಾರೈಸಿದೆ. ಈ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಶ್ರೀ ಸಲೀಂ ಅಹ್ಮದ್‌, ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
5
21
186
7,593
"ಮಗಳು ಖಾಸಗಿ ಶಾಲೆಯಲ್ಲಿ ಓದುತ್ತಿದ್ದಳು. ಮಗಳನ್ನು ನಾನು ಶಾಲೆಗೆ ಬಿಡಲು ಹೋದಾಗ ಮಗಳ ಸಹಪಾಠಿ, "ನಿಮ್ಮಮ್ಮ ಕಾರ್ಪೋರೇಶನ್ ಯುನಿಫಾರ್ಮ್ ಹಾಕ್ಕೊಂಡು ಬಂದಿದ್ದಾರೆ, ವಾಸನೆ.. ದೂರ ಕೂತ್ಕೋ..ನನ್ನ ಪಕ್ಕ ಬರಬೇಡ" ಅಂತ ಹೀಯಾಳಿಸಿ ದೂರ ತಳ್ಳಿದಳಂತೆ!” ಅರಮನೆ ಮೈದಾನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ, ಈ ಘಟನೆಯನ್ನು ನೆನೆದು ಪೌರಕಾರ್ಮಿಕೆ ತಾಯಿಯೊಬ್ಬರು ಕಣ್ಣೀರು ಹಾಕಿದ ವಿಡಿಯೋ ನೋಡಿ ಮನಸ್ಸಿಗೆ ಅತೀವ ನೋವಾಯಿತು. ಶ್ರಮದಲ್ಲೇ ಶಿವನನ್ನು ಕಾಣುವ ಪೌರಕಾರ್ಮಿಕರೇ ನಿಜವಾದ ಕಾಯಕಯೋಗಿಗಳು. ಅವರಿಲ್ಲದೆ ನಮ್ಮ ನಗರಗಳು ಸ್ವಚ್ಛವಾಗಿರಲು ಹಾಗೂ ನಾವೆಲ್ಲರೂ ಆರೋಗ್ಯವಾಗಿರಲು ಸಾಧ್ಯವೇ ಇಲ್ಲ. ಇದಕ್ಕಾಗಿಯೇ ಕಾರ್ಯಕ್ರಮದಲ್ಲಿ ನಾನು ಅವರ ಸಮವಸ್ತ್ರವನ್ನು ಧರಿಸಿ, ಅವರೊಂದಿಗೆ ಕುಳಿತು ಊಟ ಮಾಡಿದೆ. ಇದೊಂದು ತೋರಿಕೆಯ ನಡೆಯಲ್ಲ, ನಮ್ಮ ಸುಸಂಸ್ಕೃತ ಸಮಾಜದಲ್ಲಿ ಇಂತಹ ಅಸ್ಪೃಶ್ಯ ಮನೋಭಾವನೆ ಸಂಪೂರ್ಣವಾಗಿ ತೊಲಗಬೇಕು ಎಂಬ ಆಶಯ. ಜಗಜ್ಯೋತಿ ಬಸವಣ್ಣನವರು ಹೇಳಿದಂತೆ: "ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯಾ" ಮಾನವೀಯತೆಯೇ ಧರ್ಮವಾಗಿರುವ ಈ ನಾಡಿನಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣೋಣ. ನಮ್ಮ ಆಪತ್ಬಾಂಧವರಾದ ಪೌರಕಾರ್ಮಿಕರನ್ನು ಮತ್ತು ಅವರ ಶ್ರೇಷ್ಠ ಕಾಯಕವನ್ನು ನಾವೆಲ್ಲರೂ ಗೌರವಿಸೋಣ. #DignityOfLabour
75
331
3,452
165,571
ನಾಡನ್ನು ಸ್ವಚ್ಛವಾಗಿಡಲು ಹಗಲಿರುಳು ಶ್ರಮಿಸುವ ಕಾಯಕಯೋಗಿಗಳ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ, ಅರಮನೆ ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿದೆನು. ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಕೆ. ಹೆಚ್. ಮುನಿಯಪ್ಪ, ಶ್ರೀ ಹೆಚ್. ಸಿ. ಬಾಲಕೃಷ್ಣ, ಡಾ. ಯತೀಂದ್ರ ಸಿದ್ದರಾಮಯ್ಯ, ಶ್ರೀ ಕೆ. ಎಸ್. ಬಸವಂತಪ್ಪ, ಮಾಜಿ ಸಚಿವರಾದ ಶ್ರೀ ಹೆಚ್. ಆಂಜನೇಯ, ಸಫಾಯಿ‌ ಕರ್ಮಚಾರಿ ಆಯೋಗದ ಅಧ್ಯಕ್ಷ‌ರಾದ ಶ್ರೀ ಪಿ. ರಘು, ಸಫಾಯಿ‌ ಕರ್ಮಚಾರಿ ಅಭಿವೃದ್ಧಿ ನಿಗಮದ ಶ್ರೀ ಅಶೋಕ್ ಸಾಲಪ್ಪ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶ್ರೀಮತಿ ಬಿ. ಬಿ. ಕಾವೇರಿ, ಪೌರಕಾರ್ಮಿಕ ಅಭಿವೃದ್ಧಿ ಸಂಘದ ಅಧ್ಯಕ್ಷೆ ಶ್ರೀಮತಿ ಶೈಲಾ ಕೆ. ಡಿ., ಸಫಾಯಿ‌ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಶ್ರೀ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
7
16
214
8,668
ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ, ರಾಜ್ಯದ ಪಾಲು ನೀಡಲು ಸಿದ್ಧ. ಸರ್ವಪಕ್ಷ ನಿಯೋಗ ಮೂಲಕ ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಬೇಡಿಕೆ ಇಡೋಣ. ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಪ್ರಮುಖಾಂಶಗಳು:
3
8
68
5,619
ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ʻವಿಕ ಸೂಪರ್‌ ಸ್ಟಾರ್‌ ರೈತʼ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮಣ್ಣಿನೊಂದಿಗೆ ಬದುಕು ಕಟ್ಟಿಕೊಂಡು, ಇಡೀ ಸಮಾಜದ ಹೊಟ್ಟೆ ತುಂಬಿಸುವ ರೈತರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ರೈತ ಸಂತೃಪ್ತನಾದರೆ ನಾಡು ಸಮೃದ್ಧವಾಗುತ್ತದೆ, ರೈತನ ಬದುಕು ಹಸನಾದರೆ ಕರ್ನಾಟಕದ ಭವಿಷ್ಯವೂ ಉಜ್ವಲವಾಗುತ್ತದೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅನ್ನದಾತರನ್ನು ಗೌರವಿಸಿದ್ದು ವಿಶೇಷವಾಗಿತ್ತು. ಈ ವೇಳೆ ಸಚಿವರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ, ಶ್ರೀ ಹೆಚ್.ಸಿ. ಬಾಲಕೃಷ್ಣ, ಶ್ರೀ ಪಿ.ಎಂ. ನರೇಂದ್ರಸ್ವಾಮಿ, ವಿಜಯ ಕರ್ನಾಟಕ ಸಿಇಒ ಶ್ರೀ ದೀಪಕ್‌ ಸಲುಜ, ಕೃಷಿ ಇಲಾಖೆ ಕಾರ್ಯದರ್ಶಿ ಶ್ರೀ ತ್ರಿಲೋಕ್ ಚಂದ್ರ, ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಶ್ರೀ ಸುದರ್ಶನ್ ಚನ್ನಂಗಿಹಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
4
14
105
6,283
ಇಂದು ಜಿಬಿಎ ಮುಖ್ಯ ಕಚೇರಿ ಆವರಣದಲ್ಲಿ ಪೌರಕಾರ್ಮಿಕರ ಪಿತಾಮಹ ಐ.ಪಿ.ಡಿ ಸಾಲಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದೆ. ಪೌರಕಾರ್ಮಿಕರ ಹಕ್ಕು, ಗೌರವ ಮತ್ತು ಘನತೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಐ.ಪಿ.ಡಿ. ಸಾಲಪ್ಪ ಅವರ ಸೇವೆ ಹಾಗೂ ಹೋರಾಟವನ್ನು ಸ್ಮರಿಸಲಾಯಿತು. ಈ ವೇಳೆ ಸಚಿವರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ, ಶ್ರೀ ಹೆಚ್.ಸಿ. ಬಾಲಕೃಷ್ಣ, ಶ್ರೀ ಪಿ.ಎಂ. ನರೇಂದ್ರಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
2
18
215
7,976
ಬೆಳಕಿನ ಹಬ್ಬ, ಭಕ್ತಿಯ ಉತ್ಸವ, ಕರುನಾಡಿನ ಸಾಂಸ್ಕೃತಿಕ ಕಿರೀಟ ನಮ್ಮ ಮೈಸೂರು ದಸರಾ. ಚಿನ್ನದ ಅಂಬಾರಿಯ ಗಾಂಭೀರ್ಯ ಹಾಗೂ ಅರಮನೆಯ ಝಗಮಗಿಸುವ ದೀಪಗಳ ನಡುವೆ, ತಾಯಿ ಚಾಮುಂಡೇಶ್ವರಿಯ ವೈಭವವನ್ನು ಕಣ್ತುಂಬಿಕೊಳ್ಳುವ ಸಮಯವೇ ನಮ್ಮ ಮೈಸೂರು ದಸರಾ. ಈ ಬಾರಿಯ ನಾಡಹಬ್ಬ ಮೈಸೂರು ದಸರಾ 2026 ಅನ್ನು ಜ್ಞಾನ ಮತ್ತು ದಾಸೋಹದ ಕಾಯಕಯೋಗಿ, ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ. ಸಂತರು ಮತ್ತು ಸಂಸ್ಕೃತಿಯ ಈ ಅಪೂರ್ವ ಮಿಲನ ನಮ್ಮ ನಾಡಿನ ಪರಂಪರೆಯನ್ನು ಮತ್ತಷ್ಟು ಬೆಳಗಲಿದೆ. ನಾಡಿನೆಲ್ಲೆಡೆ ಭಕ್ತಿ, ಸಡಗರದ ಹೊನಲು ಹರಿಯಲಿ, ದಸರಾ ಸಂಭ್ರಮ ಮನೆಮನಗಳಲ್ಲಿ ನಲಿಯಲಿ. #MysuruDasara2026
19
95
950
13,832
ಅನೇಕ ಭಾಷೆಗಳಲ್ಲಿ ಅಸಂಖ್ಯಾತ ಗೀತೆಗಳಿಗೆ ಜೀವ ತುಂಬಿ ಕಲಾಭಿಮಾನಿಗಳ ಹೃದಯ ಗೆದ್ದ ಗಾನಗಂಧರ್ವ, ಪದ್ಮಭೂಷಣ ಪುರಸ್ಕೃತ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ತಮ್ಮ ಸುಮಧುರ ಕಂಠಸಿರಿಯ ಮೂಲಕ ಭಾರತೀಯ ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದ ಅವರ ದಿವ್ಯ ಧ್ವನಿ ಎಂದೆಂದಿಗೂ ಅಮರ.
6
41
479
10,100
"ರೈತರ ಬೆವರಿನಿಂದ ನಾವು ಬದುಕುತ್ತಿದ್ದೇವೆ. ರೈತರ ಶ್ರಮಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವಿಲ್ಲ." ಚಿತ್ರದುರ್ಗದಲ್ಲಿ ಇಂದು ನಡೆದ ರೈತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಮುಖಾಂಶಗಳು:
8
18
132
7,496
The vote is the foundation of our democracy. When that foundation is threatened, every institution created to protect our Constitution must be held accountable. LoP Shri @RahulGandhi has consistently warned the nation about vote chori, raising specific concerns in our own Mahadevapura and Aland, as well as in Maharashtra and Haryana. He took this fight to the people through the Voter Adhikar Yatra and has repeatedly demanded transparency and accountability from the Election Commission. Now, the revelations of recorded objections from within the ECI itself have brought these concerns into sharper focus. The questions he raised cannot simply be dismissed anymore. The credibility of our electoral institutions must now be restored through accountability and a transparent investigation. Chief Election Commissioner Mr. Gyanesh Kumar must resign immediately, and all those involved must be investigated for their conspiracy to steal elections. No one can be above the Constitution, and the people of India have the right to know the truth about their vote.
Congress
84
697
3,306
20,976
ಚಿತ್ರದುರ್ಗ ಜಿಲ್ಲೆಯ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ಇಂದು ನಡೆದ ರೈತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದೆನು. ರೈತರನ್ನು ಆರ್ಥಿಕವಾಗಿ ಮತ್ತಷ್ಟು ಸಬಲರನ್ನಾಗಿ ಮಾಡಲು ಹಾಗೂ ಅವರ ಶ್ರೇಯೋಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಕೆ. ಹೆಚ್. ಮುನಿಯಪ್ಪ, ಶ್ರೀ ಸತೀಶ್ ಜಾರಕಿಹೊಳಿ, ಶ್ರೀ ಎನ್. ಚಲುವರಾಯಸ್ವಾಮಿ,‌ ಶ್ರೀ ಟಿ. ರಘುಮೂರ್ತಿ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಡಾ. ಟಿ. ಬಿ. ಜಯಚಂದ್ರ, ಮಾಜಿ ಸಚಿವರಾದ ಶ್ರೀ ಹೆಚ್.‌ ಆಂಜನೇಯ, ಶಾಸಕರಾದ ಶ್ರೀ ವೀರೇಂದ್ರ ಪಪ್ಪಿ, ಮಾಜಿ ಸಂಸದ ಶ್ರೀ ಚಂದ್ರಪ್ಪ, ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್‌ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.
4
21
212
9,388
DK Shivakumar retweeted
LIVE: Press Conference | Indira Bhawan, New Delhi nitter.net/i/broadcasts/1qKVmyLgY…
465
4,166
11,672
413,368
The right to vote is the foundation of our democracy, and any attempt to undermine the electoral process must be met with complete transparency. The nation awaits LoP Shri @RahulGandhi ’s press conference at 4 PM today at Indira Bhawan, where the truth will be placed before the people.
The enemies of the Constitution have been exposed. Justice will be served. I will address a press conference at 4 pm. #VoteChori
29
311
1,985
21,544