Minister for Forest, Ecology & Environment - Karnataka | MLA - BTM Layout |

Karnataka
ಬಾಳೆಹೊನ್ನೂರಿನಲ್ಲಿ ‘ಕಸ್ತೂರಿ ರಂಗನ್ ವರದಿ’ಯ ಸಾಧಕ-ಬಾಧಕಗಳ ಕುರಿತು ಸಾರ್ವಜನಿಕರೊಂದಿಗೆ ನೇರ ಸಂವಾದ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಉದ್ಘಾಟಿಸಲಾಯಿತು. ವರದಿಯಿಂದ ಮಲೆನಾಡಿನ ಜನಸಾಮಾನ್ಯರ ಮೇಲೆ ಉಂಟಾಗುವ ಪರಿಣಾಮಗಳು ಹಾಗೂ ಸ್ಥಳೀಯರ ಅಹವಾಲುಗಳನ್ನು ನೇರವಾಗಿ ಆಲಿಸಿ, ಹಲವು ಮಹತ್ವದ ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು.  ಸೆಪ್ಟೆಂಬರ್ 21 ರಿಂದ ಆರಂಭವಾಗಲಿರುವ ವಿಶೇಷ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಿ ರೈತರು ಹಾಗೂ ಜನಸಾಮಾನ್ಯರ ಹಿತಾಸಕ್ತಿ ಕಾಪಾಡುವ ಜೊತೆಗೆ ಕಾಡನ್ನು ಸಂರಕ್ಷಿಸುವ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.  ಕಾರ್ಯಕ್ರಮದಲ್ಲಿ ಸಚಿವರಾದ ಶ್ರೀ ಕೆ.ಜೆ. ಜಾರ್ಜ್‌, ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಶ್ರೀ ಟಿ.ಡಿ. ರಾಜೇಗೌಡ, ಶ್ರೀ ಹೆಚ್.ಡಿ. ತಮ್ಮಯ್ಯ, ಶ್ರೀಮತಿ ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಗಾಯತ್ರಿ ಶಾಂತೇಗೌಡ, ಶ್ರೀಮತಿ ಆರತಿ ಕೃಷ್ಣ ಸೇರಿದಂತೆ ಪ್ರಮುಖರು ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.  #RamalingaReddy #KasturiranganReport #ಬಾಳೆಹೊನ್ನೂರು
2
4
562
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದಲ್ಲಿ ಕಸ್ತೂರಿ ರಂಗನ್‌ ವರದಿ ಕುರಿತು ಹಮ್ಮಿಕೊಳ್ಳಲಾಗಿದ್ದ ಸಂವಾದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದೆ. ಪರಿಸರ ಸಂರಕ್ಷಣೆ ಮತ್ತು ಅಲ್ಲಿನ ಸ್ಥಳೀಯ ರೈತರು ಹಾಗೂ ಜನರ ಬದುಕು ಎರಡೂ ನಮ್ಮೆಲ್ಲರಿಗೂ ಸಮಾನವೇ. ತಲೆಮಾರುಗಳಿಂದ ಮಲೆನಾಡಿನಲ್ಲಿ ಬದುಕು ಕಟ್ಟಿಕೊಂಡಿರುವ ಜನರಿಗೆ ಯಾವುದೇ ರೀತಿಯ ಅಸುರಕ್ಷತೆ ಕಾಡದಂತೆ ನೋಡಿಕೊಳ್ಳುವುದು ನಮ್ಮ ಸರ್ಕಾರದ ಜವಾಬ್ದಾರಿ. ಕಸ್ತೂರಿ ರಂಗನ್‌ ವರದಿ ಕುರಿತಂತೆ ಸಾರ್ವಜನಿಕರು ಮತ್ತು ರೈತರಿಂದ ಬಂದಿರುವ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಪರಿಸರ ಸಂರಕ್ಷಣೆ ಹಾಗೂ ಜನಪರ ಕಾಳಜಿಯ ನಡುವೆ ಸರಿಯಾದ ಸಮತೋಲನ ಕಾಯ್ದುಕೊಂಡು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ಸದಾ ರೈತರ ಹಾಗೂ ಮಲೆನಾಡಿನ ಜನರ ಬೆನ್ನೆಲುಬಾಗಿ ನಿಲ್ಲಲಿದೆ. ಈ ಸಂವಾದ ಕಾರ್ಯಕ್ರಮದಲ್ಲಿ ಸಚಿವರು, ಸಂಸತರು, ಸ್ಥಳೀಯ ಶಾಸಕರು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು. ಸಚಿವರಾದ ಶ್ರೀ ಮಧು ಬಂಗಾರಪ್ಪ, ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ, ಶಾಸಕರಾದ ಶ್ರೀ ಬೇಳೂರು ಗೋಪಾಲಕೃಷ್ಣ, ಶ್ರೀ ಅರಗ ಜ್ಞಾನೇಂದ್ರ, ಶ್ರೀಮತಿ ಶಾರದಾ ಪೂರ್ಯನಾಯ್ಕ್, ಶ್ರೀ ಎಸ್.ಎನ್. ಚನ್ನಬಸಪ್ಪ, ಶ್ರೀ ಮಂಜುನಾಥ ಗೌಡ, ಶ್ರೀ ಅಂಶುಮನ್, ಶ್ರೀ ಹೆಚ್. ಎಸ್. ಸುಂದರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. #RamalingaReddy #KasturiranganReport #DKShivakumar #Malenadu #Shivamogga
2
2
685
ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಾರ್ವಜನಿಕ ಸಂವಾದ ಸಭೆಯಲ್ಲಿ ಪಾಲ್ಗೊಂಡು ಸ್ಥಳೀಯ ರೈತರು, ಸಂಘಟನೆಗಳು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಗಂಭೀರವಾಗಿ ಆಲಿಸಿದೆ. ಪ್ರಮುಖ ನಿರ್ಣಯಗಳು ಹಾಗೂ ಭರವಸೆಗಳು: • ಕೇರಳ ಮಾದರಿ ಭೌತಿಕ ಸರ್ವೆ: ಉಪಗ್ರಹ ನಕ್ಷೆಗಳ ಆಧಾರದ ಮೇಲೆ ಕೇವಲ ಸ್ಯಾಟಲೈಟ್ ಮ್ಯಾಪ್ ಆಧರಿಸಿ ವರದಿ ಜಾರಿಗೊಳಿಸುವುದರಿಂದ ಸ್ಥಳೀಯರಿಗೆ ತೊಂದರೆಯಾಗಲಿದೆ ಎಂಬ ಆತಂಕ ಸ್ಥಳೀಯರಿಗೆ ಇದ್ದು, ಕೇರಳ ರಾಜ್ಯದ ಮಾದರಿಯಲ್ಲೇ ತಜ್ಞರ ಸಮಿತಿ ರಚಿಸಿ, ಸ್ಥಳದಲ್ಲೇ ಭೌತಿಕ ಸಮೀಕ್ಷೆ (Physical Survey) ನಡೆಸಿ ಜನವಸತಿ ಹಾಗೂ ಕೃಷಿ ಭೂಮಿಯನ್ನು ಪರಿಸರ ಸೂಕ್ಷ್ಮ ವಲಯದಿಂದ (ESA) ಬೇರ್ಪಡಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. • ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆ: ಸೋಮವಾರದಿಂದ ಆರಂಭವಾಗಲಿರುವ ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ, ರಾಜ್ಯದ ಸ್ಪಷ್ಟ ನಿಲುವನ್ನು ನಿಗದಿತ ಅವಧಿಯೊಳಗೆ ಕೇಂದ್ರ ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಸಲಾಗುತ್ತದೆ. • ಅರಣ್ಯವಾಸಿಗಳ ರಕ್ಷಣೆ: ದಶಕಗಳಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬಗರ್ ಹುಕುಂ ಸಾಗುವಳಿ ಹಾಗೂ ಅರಣ್ಯ ಹಕ್ಕು ಕಾಯ್ದೆಗಳಿಗೆ ಸಂಬಂಧಿಸಿದಂತೆ ಜನರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಗತ್ಯ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯ ಶಾಸಕರಾದ ವಿ. ಸುನಿಲ್ ಕುಮಾರ್, ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ ಮತ್ತಿತರರು ಉಪಸ್ಥಿತರಿದ್ದರು. #RamalingaReddy #Udupi #KasturiRangan #WesternGhats #KarnatakaForest
2
5
1,639
ದೃಢ ಕರ್ನಾಟಕದ ಸಂಕಲ್ಪ ⭐️ ರಾಜ್ಯ ಸಚಿವ ಸಂಪುಟ ಸಭೆ 📍ಮಂಗಳೂರು, ದಕ್ಷಿಣ ಕನ್ನಡ #RamalingaReddy | #CabinetInMangaluru | #ದೃಢಕರ್ನಾಟಕಸಂಕಲ್ಪ
4
17
1,793
ಬೆಂಗಳೂರು ನಗರ ಜಿಲ್ಲೆ, ಪೂರ್ವ ತಾಲೂಕಿನ ವರ್ತೂರು ಹೋಬಳಿಯ ಪಣತೂರು ಗ್ರಾಮದಲ್ಲಿ ಅರಣ್ಯ ಇಲಾಖೆಯ 'ನಗರ ವನ' ಯೋಜನೆಯಡಿ, ಕ್ವಾಲ್ಕಾಮ್ ಇಂಡಿಯಾ (Qualcomm India) ಸಂಸ್ಥೆಯ CSR ಅನುದಾನ ಹಾಗೂ ‘ಸೇಟ್ರೀಸ್’ (SayTrees) ಸಹಯೋಗದೊಂದಿಗೆ ₹4.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ 45 ಎಕರೆ ವಿಸ್ತೀರ್ಣದ ಬೃಹತ್ ವೃಕ್ಷೋದ್ಯಾನವನ್ನು ಇಂದು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಯಿತು. ನಗರ ಪ್ರದೇಶದ ಜನರಿಗೆ ಶುದ್ಧ ಗಾಳಿ, ಹಸಿರು ಪರಿಸರ ಹಾಗೂ ಉತ್ತಮ ಆರೋಗ್ಯಕರ ವಾತಾವರಣ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಉದ್ಯಾನದ ಪ್ರಮುಖ ಸೌಲಭ್ಯಗಳು: • 2 ಕಿ.ಮೀ ಉದ್ದದ ಮುರಮ್ ಇಕೋ-ಟ್ರೇಲ್ / ನೇಚರ್ ಟ್ರೇಲ್ • ತೆರೆದ ಜಿಮ್ (Open Gym) ಹಾಗೂ ಮಕ್ಕಳ ಆಟದ ಉಪಕರಣಗಳು • ಗಿಡ-ಮರಗಳು ಮತ್ತು ವನ್ಯಜೀವಿಗಳ ಮಾಹಿತಿ ತಿಳಿಯಲು QR Code ನಾಮಫಲಕಗಳು • ವಿಶ್ರಾಂತಿಗಾಗಿ ಪರ್ಗೋಲಾ (Pergola), ಗಜಿಬೋ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ • ಹೊಸ ಕೊಳವೆಬಾವಿ, ವಿದ್ಯುತ್ ಸಂಪರ್ಕ, ವಾಹನ ಪಾರ್ಕಿಂಗ್ ಮತ್ತು ಶೌಚಾಲಯ ಸೌಲಭ್ಯ • ಸುತ್ತಲೂ ಭದ್ರತಾ ಕಾಂಪೌಂಡ್ ನಿರ್ಮಿಸಲು ಹೆಚ್ಚುವರಿಯಾಗಿ ₹1 ಕೋಟಿ CSR ಅನುದಾನ ಬಳಕೆಯಾಗುತ್ತಿದ್ದು, ಉಳಿದ 100 ಎಕರೆ ಪ್ರದೇಶವನ್ನೂ ಇಲಾಖೆಯ ಸಹಯೋಗದೊಂದಿಗೆ ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುವುದು. ಕಾರ್ಯಕ್ರಮದಲ್ಲಿ ಸಂಸದರಾದ ಶ್ರೀ ಪಿ. ಸಿ. ಮೋಹನ್, ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ, ಹಿರಿಯ ಅರಣ್ಯ ಸಂರಕ್ಷಣಾಧಿಕಾರಿಗಳಾದ (CCF) ಶ್ರೀಮತಿ ಮೀನಾಕ್ಷಿ ನೇಗಿ, ಶ್ರೀಮತಿ ಸ್ಮಿತಾ, ಶ್ರೀ ಚಕ್ರಪಾಣಿ, ಶ್ರೀಮತಿ ಅನುಪಮ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. #RamalingaReddy #GreenBengaluru #NagaraVana #ForestDepartment #PanathurTreePark #UrbanForest
1
4
22
1,115
ಇಂದು ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಅತ್ತಿಬೆಲೆ ಸರ್ಕಲ್‌ನಲ್ಲಿ ಪೊಲೀಸ್ ಇಲಾಖೆ ಹಾಗೂ ಟಿವಿಎಸ್ ಮೋಟಾರ್ ಕಂಪನಿಯ ಸಹಯೋಗದೊಂದಿಗೆ ನೂತನವಾಗಿ ಅಳವಡಿಸಲಾದ ‘ಸ್ಮಾರ್ಟ್ ಸಂಚಾರ ನಿರ್ವಹಣಾ ಸಿಗ್ನಲ್ ದೀಪ’ವನ್ನು ಲೋಕಾರ್ಪಣೆಗೊಳಿಸಲಾಯಿತು. ನಿರಂತರ ವಾಹನ ಸಂಚಾರದಿಂದ ಕೂಡಿದ ಈ ಜಂಕ್ಷನ್‌ನಲ್ಲಿ ನೂತನ ಸಿಗ್ನಲ್ ವ್ಯವಸ್ಥೆಯು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರ ಸಮಯ ಉಳಿತಾಯವಾಗಲಿದೆ. ಆನೇಕಲ್ ಶಾಸಕರಾದ ಶ್ರೀ ಬಿ. ಶಿವಣ್ಣ, ಟಿವಿಎಸ್ ಮೋಟಾರ್ ಕಂಪನಿಯ ಸಿಇಓ ಕೆ.ಎನ್. ರಾಧಕೃಷ್ಣನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಲಕ್ಷ್ಮೀ ನಾರಾಯಣ್, ಡಾ. ವೆಂಕಟೇಶ್ ಪ್ರಸನ್ನ, ಅತ್ತಿಬೆಲೆ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಮಂಜುನಾಥ್ ಬಿ.ಎಸ್, ಮುಖಂಡರಾದ ಶ್ರೀ ರಘುಪತಿ ರೆಡ್ಡಿ, ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. #RamalingaReddy #Attibele #BengaluruTraffic #KarnatakaPolice #Anekal @tvsmotorcompany
4
26
1,533
ಸರ್ವರಿಗೂ ಶ್ರೀ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. Warm greetings to everyone on Ganesha Chaturthi. May Lord Ganesha bless you and your family with health, happiness, and prosperity. This year, let us welcome Ganesha with devotion and care for our nature: 🌊 Say no to PoP idols—choose natural clay instead. 🌊 Protect our lakes, rivers and other water bodies from pollution. 🌊 The choices we make today shape the environment we leave for our children tomorrow. #RamalingaReddy #GaneshChaturthi #KSPCB #KarnatakaForest #Karnataka @Sowmyareddyr @karnatakakspcb @aranya_kfd
1
5
7
744
ಸರ್ವರಿಗೂ ಶ್ರೀ ಗಣೇಶ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಣ್ಣಿನ ಗಣೇಶನನ್ನು ಪೂಜಿಸೋಣ, ಪರಿಸರವನ್ನು ಪ್ರೀತಿಯಿಂದ ರಕ್ಷಿಸೋಣ. #RamalingaReddy #GaneshChaturthi #Bengaluru #KarnatakaForest #Karnataka
3
14
771
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ, ಮಾಜಿ ಶಾಸಕರಾದ ಶ್ರೀ ನೆ. ಲ. ನರೇಂದ್ರ ಬಾಬು ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪಕ್ಷದ ಸಿದ್ಧಾಂತ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕಾಂಗ್ರೆಸ್ ಕುಟುಂಬಕ್ಕೆ ಅವರ ಪುನರಾಗಮನವು ಪಕ್ಷ ಸಂಘಟನೆಗೆ ಮತ್ತಷ್ಟು ಬಲ ತುಂಬಲಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಶ್ರೀ ಡಿ. ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ. ಕೆ. ಹರಿಪ್ರಸಾದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶ್ರೀ ಎಚ್. ಎಂ. ರೇವಣ್ಣ, ಮಾಜಿ ಸಚಿವೆ ಶ್ರೀಮತಿ ರಾಣಿ ಸತೀಶ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರಾದ ಶ್ರೀ ರಮೇಶ್ ಬಾಬು ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. #RamalingaReddy #DKShivakumar #BKHariprasad #KPCC #Congress
1
3
9
1,015
ಆನೇಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ₹30 ಕೋಟಿ ಮೊತ್ತದ ವಿವಿಧ ಜನಪರ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಶ್ರೀ ಬಿ. ಶಿವಣ್ಣನವರೊಂದಿಗೆ ಭೂಮಿಪೂಜೆ ನೆರವೇರಿಸಿ ಸ್ಥಳೀಯ ಗ್ರಾಮಸ್ಥರ ಮನವಿಗಳನ್ನು ಸ್ವೀಕರಿಸಿದೆ. ಅನೇಕ ಸ್ಥಳೀಯ ಮುಖಂಡರು, ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. #RamalingaReddy #Anekal #ಆನೇಕಲ್ #Suryanagar
3
4
16
2,619
To reflect the local identity, historical context, and geographical familiarity of our neighborhoods, I have written to the Managing Director of @OfficialBMRCL requesting name changes for three Metro stations in our BTM Layout constituency: 🚇 JP Nagar 4th Phase ➡️ NS Palya 🚇 Tavarekere ➡️ SG Palya 🚇 Dairy Circle ➡️ Lakkasandra Station names must resonate with the local community and ensure effortless navigation for daily commuters. I have urged BMRCL to take into account the views of local residents, citizen forums, and community representatives before finalizing these names. #RamalingaReddy #NammaMetro #BTMLayout #Bengaluru #PublicTransport
37
9
54
13,240
ಥಣಿಸಂದ್ರದ ‘ಬೆಂಗಳೂರು ಅನಾಲಿಟಿಕಲ್ ರಿಸರ್ಚ್ ಲ್ಯಾಬ್’ ಮೇಲೆ ಇಂದು KSPCB ಅಧಿಕಾರಿಗಳೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪರಿಶೀಲನೆಯಲ್ಲಿ ಕಂಡುಬಂದ ಪ್ರಮುಖ ಲೋಪಗಳು: • ನಕಲಿ ವರದಿ: ಪರೀಕ್ಷೆಯನ್ನೇ ನಡೆಸದೆ 138 ಕಂಪನಿಗಳಿಗೆ ಪರಿಸರ ವರದಿ ವಿತರಣೆ • ಅಕ್ರಮ ಕಾರ್ಯಾಚರಣೆ: ಲೈಸೆನ್ಸ್ ಅವಧಿ ಮುಗಿದಿದ್ದರೂ ಪರವಾನಗಿ ನವೀಕರಣವಿಲ್ಲದೆ ಲ್ಯಾಬ್ ಬಳಕೆ • ತಜ್ಞರ ಗೈರು: MoEF ನಿಯಮಾವಳಿ ಪ್ರಕಾರ ಇರಬೇಕಾದ ವಿಶ್ಲೇಷಕರು (Analysts) ಸ್ಥಳದಲ್ಲಿ ಇಲ್ಲದಿರುವುದು • ಕೊಳಚೆ ನೀರು ವಿಲೇವಾರಿ: ಲ್ಯಾಬ್‌ನ ಕಲುಷಿತ ನೀರನ್ನೇ ಸಂಸ್ಕರಿಸದೆ ತೆರೆದ ಗುಂಡಿಗೆ ಹರಿಸುತ್ತಿರುವುದು ಸದರಿ ಲ್ಯಾಬ್‌ಗೆ ತಕ್ಷಣವೇ ನೋಟಿಸ್ ಜಾರಿಗೊಳಿಸಿ ತನಿಖೆಗೆ ಆದೇಶಿಸಲಾಗಿದೆ. ಜನರ ಜೀವ ಹಾಗೂ ಪರಿಸರದ ಜೊತೆ ಚೆಲ್ಲಾಟವಾಡುವ ಇಂತಹ 50ಕ್ಕೂ ಹೆಚ್ಚು ಲ್ಯಾಬ್‌ಗಳ ಮೇಲೆ ಕಠಿಣ ನಿಗಾ ವಹಿಸಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. Conducted a surprise inspection at the 'Bengaluru Analytical Research Lab' in Thanisandra today along with KSPCB officials. Key violations uncovered during the inspection: • Fake Reports: Issuing environmental compliance reports to over 138 companies without conducting actual tests. • Illegal Operation: Continuing operations despite an expired license and without necessary renewals. • Absence of Experts: Qualified analysts mandated by MoEF guidelines were not present on site. • Illegal Waste Disposal: Directly discharging untreated, contaminated wastewater from the lab into an open pit. A notice has been served to the lab immediately, and a thorough investigation has been ordered. Strict instructions have been issued to closely monitor and take decisive, uncompromising action against more than 50 such labs playing with public health and the environment. #RamalingaReddy #KSPCB #Bengaluru #EnvironmentProtection #PollutionControl
3
8
20
1,748
ಪರಿಸರ ಸ್ನೇಹಿ ಜೇಡಿಮಣ್ಣಿನ ಮೂರ್ತಿಗಳನ್ನು ಪೂಜಿಸುವ ಮೂಲಕ ಈ ಬಾರಿಯ ಗೌರಿ-ಗಣೇಶ ಹಬ್ಬವನ್ನು ಪ್ರಕೃತಿಗೆ ಪೂರಕವಾಗಿ ಆಚರಿಸೋಣ. ನಾಳೆ ಬೆಳಿಗ್ಗೆ 10:00 ಗಂಟೆಗೆ ಕೋರಮಂಗಲದ ಬಿಟಿಎಂ ಶಾಸಕರ ಕಚೇರಿಯಲ್ಲಿ ನಡೆಯುವ ಉಚಿತ ಮಣ್ಣಿನ ಮೂರ್ತಿಗಳ ವಿತರಣಾ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರುತ್ತೇನೆ. #RamalingaReddy #GaneshChaturthi #BTMLayout #KarnatakaForest #Bengaluru
3
8
818
ಬೆಂಗಳೂರಿನ ಅರಣ್ಯ ಭವನದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ - 2026’ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೊಂದಿಗೆ ಭಾಗವಹಿಸಿ, ನಾಡಿನ ಅರಣ್ಯ, ವನ್ಯಜೀವಿ ಹಾಗೂ ನೈಸರ್ಗಿಕ ಸಂಪತ್ತನ್ನು ರಕ್ಷಿಸುವ ಪವಿತ್ರ ಕಾಯಕದಲ್ಲಿ ಪ್ರಾಣಾರ್ಪಣೆ ಮಾಡಿದ ಇಲಾಖೆಯ ವೀರ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ನಮನ ಅರ್ಪಿಸಿದೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಿಸರ್ಗದ ರಕ್ಷಣೆಗೆ ನಿಂತ ಆ ಎಲ್ಲಾ ಅರಣ್ಯ ರಕ್ಷಕರ ತ್ಯಾಗ ಮತ್ತು ಕರ್ತವ್ಯನಿಷ್ಠೆ ಎಂದಿಗೂ ಚಿರಸ್ಮರಣೀಯ. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶ್ರೀ ಅಂಜುಂ ಪರ್ವೇಝ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೀನಾಕ್ಷಿ ನೇಗಿ, ಕುಮಾರ್ ಪುಷ್ಕರ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. #RamalingaReddy #NationalForestMartyrsDay #ರಾಷ್ಟ್ರೀಯಅರಣ್ಯಹುತಾತ್ಮರದಿನ #ForestMartyrsDay #KarnatakaForest
1
2
15
1,091
ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತದ 100 ದಿನಗಳ ಸಂಭ್ರಮದ ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ‘ದೃಢ ಕರ್ನಾಟಕದ ಸಂಕಲ್ಪ – ಶತಕದ ಪಥ, ಪ್ರಗತಿಯ ರಥ’ ಕಾರ್ಯಕ್ರಮದಲ್ಲಿ ಪಾಲ್ಗೊಂಡೆನು. ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳ ಉಪಸ್ಥಿತಿಯಲ್ಲಿ ರಾಜ್ಯದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಹಲವು ಮಹತ್ವದ ಜನಪರ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ನೀಡಲಾಯಿತು. ಅರಣ್ಯ ಸಂರಕ್ಷಣೆ, ಜೀವವೈವಿಧ್ಯತೆಯ ರಕ್ಷಣೆ ಹಾಗೂ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರ ನಿರ್ಮಾಣಕ್ಕೆ ಬದ್ಧ. ರೈತರ ಹಿತ, ಯುವಜನತೆಯ ಭವಿಷ್ಯ, ಪರಿಸರ ಸ್ನೇಹಿ ಅಭಿವೃದ್ಧಿ ಹಾಗೂ ಸರ್ವರ ಕಲ್ಯಾಣವೇ ನಮ್ಮ ಸರ್ಕಾರದ ಮೂಲ ಮಂತ್ರ. ನುಡಿದಂತೆ ನಡೆದು, ಜನರ ಬದುಕಿಗೆ ನೇರವಾಗಿ ನೆರವಾಗುವ ಗ್ಯಾರಂಟಿ ಯೋಜನೆಗಳು ಹಾಗೂ ಮಹತ್ವದ ನೀತಿಗಳೊಂದಿಗೆ ನಮ್ಮ ಪ್ರಗತಿಯ ಪಯಣ ಮುಂದುವರಿದಿದೆ. #RamalingaReddy #100Days #ದೃಢಕರ್ನಾಟಕದಸಂಕಲ್ಪ #Karnataka
2
4
10
953
Ramalinga Reddy retweeted
Ramalingareddy on Pollution: ಪರಿಸರಕ್ಕೆ ಹಾನಿ ಮಾಡ್ತಿರೋ ಕಂಪನಿಗಳ ವಿರುದ್ಧ ಸಿಡಿದೆದ್ದ ಸಚಿವ ರಾಮಲಿಂಗಾರೆಡ್ಡಿ | #TV9D #Tv9kannada #Ramalingreddy #Minister #BJP #DkShivakumar #Forestdept #TV9D
1
1
11
1,374
Ramalinga Reddy retweeted
Ramalingareddy on Factaries: ನದಿಗಳನ್ನ ಹಾಳು ಮಾಡ್ತಿರೋ ಫ್ಯಾಕ್ಟರಿಗಳ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ | #TV9D #Tv9kannada #Ramalingreddy #Minister #BJP #DkShivakumar #Forestdept #TV9D
1
1
4
847