ಕನ್ನಡಿಗ | Chief Minister, Karnataka | Congressman

ಕರ್ನಾಟಕ
ಕನ್ನಡಿಗರ ಹೋರಾಟದ ಫಲ, ಏಕತೆಯ ಸಂಕಲ್ಪದ ಪ್ರತೀಕ–ನಮ್ಮ ಹೆಮ್ಮೆಯ ಅಖಂಡ ಕರ್ನಾಟಕ
10
108
912
9,761
ಶ್ರೀಗಂಧದ ಕಂಪು, ಅಪರೂಪದ ಜೀವವೈವಿಧ್ಯ ಹಾಗೂ ಸಮೃದ್ಧ ಕಾಡುಗಳನ್ನು ಹೊಂದಿರುವ ಕರುನಾಡು ಪ್ರಕೃತಿಯ ಅಪ್ರತಿಮ ಕೊಡುಗೆ. ಈ ನಿಸರ್ಗ ಸಂಪತ್ತನ್ನು ಕಾಯ್ದುಕೊಳ್ಳುವ ಸಂಕಲ್ಪದೊಂದಿಗೆ ನಾವೆಲ್ಲರೂ ಸಿರಿಗನ್ನಡದ ಹಿರಿಮೆಯನ್ನು ಎತ್ತಿಹಿಡಿಯೋಣ.
4
11
78
3,012
"ರಾಷ್ಟ್ರಧ್ವಜದ ಜೊತೆಗೆ ನಾಡಧ್ವಜವೂ ಹಾರಾಡಲಿ" "ಭಾರತದ ಬಲ ಕರ್ನಾಟಕ” ಎಂಬ ಪರಿಕಲ್ಪನೆಯೊಂದಿಗೆ ನಾವು ಬೆಳೆಯಬೇಕು ಎಂಬುದು ನಮ್ಮ ದೂರದೃಷ್ಟಿ. ಕರ್ನಾಟಕ ರಾಜ್ಯ ಅದರಲ್ಲೂ ಬೆಂಗಳೂರು ಭಾರತದ ಹೆಬ್ಬಾಗಿಲಾಗಿ ಪರಿವರ್ತನೆಯಾಗಿದೆ. ಬೆಂಗಳೂರಿನ ಮೂಲಕ ಭಾರತವನ್ನು ನೋಡಲಾಗುತ್ತಿದೆ. ನುಡಿ ಉಳಿದರೆ ನಾಡು ಉಳಿಯಲಿದೆ, ನಾಡು ಉಳಿದರೆ ನುಡಿಯೂ ಉಳಿಯಲಿದೆ. ʻಜಗದ ಏಳಿಗೆ ಆಗುವುದೇ ಕನ್ನಡದಿಂದ' ಎನ್ನುವ ವರಕವಿ ಬೇಂದ್ರೆಯವರ ಮಾತು ನಿಜವಾಗುತ್ತಿದೆ. ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಪಾಲು ಶೇ.5.5 ರಷ್ಟಿದೆ. ದೇಶದ ಆರ್ಥಿಕತೆಯಲ್ಲಿ ರಾಜ್ಯದ ಪಾಲು ಶೇ.9.19 ರಷ್ಟಿದೆ. ಇಡೀ ರಾಜ್ಯ ಒಗ್ಗಟ್ಟಾಗಿ ನಾಡಧ್ವಜವನ್ನು ಅಧಿಕೃತಗೊಳಿಸುವ ಕುರಿತು ಕೇಂದ್ರಕ್ಕೆ ಸಂದೇಶ ರವಾನಿಸೋಣ. ಸಂವಿಧಾನದಲ್ಲಿ ನಾಡಧ್ವಜ ಹೊಂದಬಾರದು ಎಂದು ಎಲ್ಲಿಯೂ ಹೇಳಿಲ್ಲ. ರಾಷ್ಟ್ರಧ್ವಜದ ಕೆಳಗೆ ನಾಡಧ್ವಜ ಹಾರುವಂತೆ ನಾವು ಹೆಜ್ಜೆ ಇಡೋಣ. ಕನ್ನಡ, ಕರ್ನಾಟಕದ ಗೌರವ ಹೆಚ್ಚಿಸೋಣ. 2018ರ ಭಾಷಾ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಕನ್ನಡಕ್ಕೆ 8ನೇ ಸ್ಥಾನ ಸಿಕ್ಕಿದೆ. 2011ರ ಜನಗಣತಿಯ ಪ್ರಕಾರ ಬೆಂಗಳೂರಲ್ಲಿ 107 ಭಾಷೆ ಮಾತನಾಡುವ ಜನರಿದ್ದಾರೆ. ಶೇ. 44.5 ರಷ್ಟು ಜನ ಮಾತ್ರ ಕನ್ನಡವನ್ನು ಮಾತೃಭಾಷೆಯಾಗಿ ಮಾತನಾಡುವವರು ಇದ್ದಾರೆ. ಮೊದಲು ಬೆಂಗಳೂರಿನಲ್ಲಿ ಶೇ. 90 ರಷ್ಟು ಕನ್ನಡ ಮಾತನಾಡುವವರಿದ್ದರು, ಈಗ ಕಡಿಮೆಯಾಗಿದ್ದಾರೆ. ಕನ್ನಡ, ಕರ್ನಾಟಕ, ಕನ್ನಡಿಗ ಈ ಮೂರು 'ಕ'ಗಳಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಮತ್ತು ಮೂಲಸೌಕರ್ಯಗಳಲ್ಲಿ ಹೂಡಿಕೆ ಹೆಚ್ಚಿಸುವ ಮೂಲಕ ಈ ಗುರಿ ಸಾಧಿಸುವ ಹಂಬಲ ನಮ್ಮದು. ಖಾಸಗಿ ಸಂಸ್ಥೆಗಳೂ, ಐಟಿ-ಬಿಟಿ ಕಂಪನಿಗಳು ಸೇರಿದಂತೆ ಕರ್ನಾಟಕದಲ್ಲಿ ನೆಲೆಗೊಂಡಿರುವ ಎಲ್ಲಾ ಕಾರ್ಖಾನೆಗಳಲ್ಲೂ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದು ಕಳೆದ ವಾರ ಎಲ್ಲರಿಗೂ ಎಚ್ಚರಿಕೆ ನೀಡಿದ್ದೇನೆ. ನಾನು ಡಿಸಿಎಂ ಆಗಿದ್ದಾಗ ಬೆಂಗಳೂರಿನ ಎಲ್ಲಾ ಬೋರ್ಡ್‌ಗಳು 60% ಕನ್ನಡ, 40% ಇಂಗ್ಲಿಷ್ ಎಂದು ನಿಯಮ ಮಾಡಿದ್ದೆ. ಬೆಂಗಳೂರು ನಗರದಲ್ಲಿ ಎಲ್ಲಾ ಖಾಸಗಿ ಸಂಸ್ಥೆಗಳು, ಶಾಲಾ-ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಆದೇಶ ಮಾಡಿದ್ದೆ. ಅನ್ಯಭಾಷೆಗಳು ಅತಿಥಿಯಾಗಿ ಇರಬೇಕು. ಕನ್ನಡ ಭಾಷೆ ಅಧಿಪತಿಯಾಗಿ ಇರಬೇಕು. ಕನ್ನಡ ಪ್ರೀತಿಸುವುದು ಎಂದರೆ ಬೇರೆ ಭಾಷೆಯನ್ನು ದ್ವೇಷಿಸುವುದಲ್ಲ. ಎಲ್ಲ ಭಾಷೆಗಳಿಗೂ ಗೌರವ ನೀಡುವುದು. ಕಚೇರಿ, ವ್ಯಾಪಾರದ ಸಮಯದಲ್ಲಿ ಸಾರ್ವಜನಿಕ ಜೀವನದಲ್ಲಿ, ಎಲ್ಲಾ ಕಡೆ ಕನ್ನಡ ಸಹಜವಾಗಿ ಬಳಕೆಯಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಕನ್ನಡ ಜನರ ಬದುಕಿನ ಭಾಷೆಯಾಗಬೇಕು. ಬೇರೆ ಸಂಸ್ಕೃತಿಯನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಜೀವಿಸು ಎನ್ನುವ ಮಹಾತ್ಮ ಗಾಂಧಿಯವರ ಮಾತಿನಂತೆ ನಾವುಗಳು ನಡೆಯಬೇಕಿದೆ. ನಮ್ಮನ್ನು ಉಳಿಸಿರುವ ಕನ್ನಡವನ್ನು, ನಾವುಗಳೇ ಬಳಸಿ, ಬೆಳೆಸಬೇಕು. ಭಾಷೆ ಉಳಿಯಬೇಕು ಎಂದರೆ ನಾವು ಅದನ್ನು ಜಾಸ್ತಿ ಬಳಸಬೇಕು. ಕನ್ನಡ ಕಲಿಯುವ ಅನಿವಾರ್ಯತೆ ಸೃಷ್ಟಿ ಮಾಡಬೇಕು. ಕನ್ನಡದ ಬಲದೊಂದಿಗೆ ಜಗತ್ತನ್ನು ಗೆಲ್ಲಬೇಕು. ಕನ್ನಡ ಎಐ ಭಾಷೆಯಾಗಿ ಬೆಳೆಯಬೇಕು. ವಿಜ್ಞಾನದ, ಸ್ಟಾರ್ಟ್‌ಅಪ್‌ಗಳ, ಡಿಜಿಟಲ್ ಯುಗದ ಭಾಷೆಯಾಗಬೇಕು. ಮಾಸ್ತಿ ಅವರ ಮಾತೃಭಾಷೆ ತಮಿಳು. ಬೇಂದ್ರೆ ಅವರ ಮಾತೃಭಾಷೆ ಮರಾಠಿ. ಕುವೆಂಪು ಅವರು ಮೊದಲು ಕವನ ಬರೆದಿದ್ದು ಇಂಗ್ಲಿಷ್‌ನಲ್ಲಿ. ಬೂಕರ್ ಪ್ರಶಸ್ತಿ ಗಳಿಸಿದ ಬಾನು ಮುಷ್ತಾಕ್ ಅವರ ಮನೆ ಭಾಷೆ ಉರ್ದು. ಆದರೆ ಇವರೆಲ್ಲರೂ ಉಸಿರಾಡಿದ್ದು, ಹೆಸರು ಮಾಡಿದ್ದು ಕನ್ನಡದಲ್ಲಿ. ಈಗಿನ ಯುವ ಪೀಳಿಗೆಯು ಸೋಶಿಯಲ್ ಮೀಡಿಯಾ ಮೂಲಕ ಚಾಮರಾಜನಗರ ಕನ್ನಡ, ಹಾಸನ ಕನ್ನಡ, ಕುಂದಾಪುರ ಕನ್ನಡ, ದಾವಣಗೆರೆ ಕನ್ನಡ, ತುಮಕೂರು ಕನ್ನಡ ಹೀಗೆ ಕನ್ನಡದ ವೈವಿಧ್ಯತೆಯನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಲಿಯುತ್ತೇವೆ ಎಂದರೆ ಕೋಟಿ ಭಾಷೆಗಳಿವೆ. ಆದರೆ ನಮಗೆ ಮಾತನಾಡಲು ಕನ್ನಡ ಭಾಷೆಯೊಂದೇ ಇರುವುದು. ಕನ್ನಡದಲ್ಲಿ ಪ್ರಾರ್ಥನೆ ಮಾಡಿದರೆ ವಿಷ್ಣು ವರ ನೀಡುತ್ತಾನೆ. ಶಿವ ಮಳೆ ಸುರಿಸುತ್ತಾನೆ ಎಂದು ಕುವೆಂಪು ಹೇಳಿದ್ದಾರೆ. ನಿಮಗೆ ಸಿಕ್ಕಿರುವ ಈ ರಾಜ್ಯೋತ್ಸವ ಪ್ರಶಸ್ತಿ ಕನ್ನಡ ನಾಡಿನ ಜನರ ಆಶೀರ್ವಾದ. ಕನ್ನಡ ಸನ್ಮಾನ ಅದೇ ನಿಮಗೆ ವರದಾನ. ಕನ್ನಡದ ಕೀರ್ತಿಯೇ ನಮ್ಮೆಲ್ಲರಿಗೆ ಸ್ಫೂರ್ತಿ. ಸೇವೆಯನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಲಕ್ಷಾಂತರ ಸಾಧಕರು ಇದ್ದಾರೆ. ಆದರೆ ಇಲ್ಲಿರುವ ೭೧ ಜನರಿಗೆ ಪ್ರಶಸ್ತಿ ಅರಸಿಕೊಂಡು ಬಂದಿದೆ. ನಾವೆಲ್ಲರೂ ಒಗ್ಗೂಡಿ ಇಂದಿಗೆ ೭೧ ವರ್ಷ. ರಾಜ್ಯೋತ್ಸವ ಎಂದರೆ ಕನ್ನಡಿಗರೆಲ್ಲ ಒಂದಾದ ಹಬ್ಬ. ಕನ್ನಡಮ್ಮನ ಗೂಡು ಕಟ್ಟಿದ ಹಬ್ಬ. ಭುವನೇಶ್ವರಿಯ ಹಬ್ಬ ತಾಯ್ನುಡಿಯ ಹಬ್ಬವಾಗಿದೆ. - ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಪ್ರಮುಖ ಅಂಶಗಳು.
8
23
214
5,186
ಕನ್ನಡದ ಕೀರ್ತಿ ಹೆಚ್ಚಿಸಿದ ಸಾಧಕರಿಗೆ ನಾಡಿನ ಗೌರವ ಕನ್ನಡ ರಾಜ್ಯೋತ್ಸವದ ಈ ಶುಭದಿನದಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ೨೦೨೬ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಡಿನ ಕೀರ್ತಿ ಹೆಚ್ಚಿಸಿದ ಹೆಮ್ಮೆಯ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದೆ. ೭೧ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ೭೧ ಸಾಧಕರಿಗೆ ಅನಂತ ಅಭಿನಂದನೆಗಳು. ವಿವಿಧ ಕ್ಷೇತ್ರಗಳಲ್ಲಿ ನೀವು ಮಾಡಿರುವ ನಿಸ್ವಾರ್ಥ ಸಾಧನೆ ಇಡೀ ಕರುನಾಡಿಗೆ ಹೆಮ್ಮೆ ತಂದಿದೆ. ಕರುನಾಡಿನ ಹಿರಿಮೆಯನ್ನು ಹೆಚ್ಚಿಸಿದ ನಿಮ್ಮ ಶ್ರಮ ನಾಳಿನ ಪೀಳಿಗೆಗೆ ದಾರಿದೀಪ. ನಾಡು, ನುಡಿ ಮತ್ತು ಸಂಸ್ಕೃತಿಯನ್ನು ಬೆಳಗುತ್ತಿರುವ ನಿಮ್ಮ ಈ ಸಾಧನೆಯ ಹಾದಿ ಹೀಗೆಯೇ ನಿರಂತರವಾಗಿರಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ್‌ ತಂಗಡಗಿ, ವಿಧಾನಪರಿಷತ್‌ ಸಭಾಪತಿಗಳಾದ ಶ್ರೀ ಸಲೀಂ ಅಹ್ಮದ್, ವಿಧಾನಸಭಾಧ್ಯಕ್ಷರಾದ ಶ್ರೀ ಜಿ.ಎಸ್. ಪಾಟೀಲ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
9
70
3,710
ಸಿರಿಗನ್ನಡದ ಕಂಪು, ಮಕ್ಕಳ ಉತ್ಸಾಹದ ಇಂಪು... ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ತಮ್ಮ ಅದ್ಭುತ ಕಲಾತ್ಮಕತೆ ಹಾಗೂ ಶಿಸ್ತಿನ ಪಥಸಂಚಲನವನ್ನು ಪ್ರದರ್ಶಿಸಿದ ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು. ಈ ಎಳೆಯ ಪ್ರತಿಭೆಗಳನ್ನು ತಿದ್ದಿ ತೀಡಿದ ಶಿಕ್ಷಕರಿಗೆ ಹಾಗೂ ಬೆನ್ನೆಲುಬಾಗಿ ನಿಂತ ಪೋಷಕರಿಗೂ ನನ್ನ ವಿಶೇಷ ಧನ್ಯವಾದಗಳು. ನಿಮ್ಮ ಈ ನವೋಲ್ಲಾಸವನ್ನು ಕಂಡಾಗ, ಐವತ್ತು ವರ್ಷಗಳ ಹಿಂದೆ ಇದೇ ಕ್ರೀಡಾಂಗಣದಲ್ಲಿ ರಾಜ್ಯೋತ್ಸವಕ್ಕೆ ಬರುತ್ತಿದ್ದ ನನ್ನ ಬಾಲ್ಯದ ಹೆಜ್ಜೆಗುರುತುಗಳು ಮರುಕಳಿಸಿದವು. ಅಂದು ನಿಮ್ಮ ಸ್ಥಾನದಲ್ಲಿ ನಾನಿದ್ದೆ, ಇಂದು ನಾಡಿನ ಪ್ರಜಾಸೇವಕನಾಗಿ ನಿಮ್ಮೆದುರು ನಿಂತಿದ್ದೇನೆ. ನಾಳೆ ನೀವೂ ಕೂಡ ಜ್ಞಾನದ ಪಥದಲ್ಲಿ ಸಾಗಿ, ಸಾಧನೆಯ ಶಿಖರವೇರಿ ನಾಡಿನ ಕೀರ್ತಿಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸುವಂತಾಗಲಿ ಎಂಬುದೇ ನನ್ನ ಹಾರೈಕೆ. ನಿಮ್ಮ ಈ ಶಿಸ್ತುಬದ್ಧ ಹಾಗೂ ಕಲಾತ್ಮಕ ಪ್ರದರ್ಶನ ಕೇವಲ ಈ ವೇದಿಕೆಗೆ ಸೀಮಿತವಾಗಬಾರದು. ಮುಂದಿನ ವರ್ಷದ ನಾಡಹಬ್ಬ ದಸರಾ ಮಹೋತ್ಸವದ ಪಥಸಂಚಲನದಲ್ಲೂ ನೀವು ಭಾಗಿಯಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಮುಂದಿನ ನಿಮ್ಮೆಲ್ಲಾ ಹೆಜ್ಜೆಗಳಿಗೂ ಒಳಿತಾಗಲಿ.
15
171
4,151
ಕರುನಾಡ ಸಾಧಕರಿಗೆ ಪ್ರೀತಿಯ ಸಂತೋಷಕೂಟ ೭೧ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಪ್ರಯುಕ್ತ ಇಂದು ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ಸಂತೋಷಕೂಟದಲ್ಲಿ ಭಾಗವಹಿಸಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಅಭಿನಂದನೆಗಳನ್ನು ತಿಳಿಸಿದೆ. ನಾಡಿನ ಹೆಸರನ್ನು ಉತ್ತುಂಗಕ್ಕೆ ಏರಿಸಿದ ಎಲ್ಲ ಹೆಮ್ಮೆಯ ಸಾಧಕರಿಗೆ ಈ ಕನ್ನಡಿಗನಿಂದ ಕೃತಜ್ಞತೆ ಹಾಗೂ ಪ್ರೀತಿಯ ಗೌರವ.
14
146
4,456
ನಮ್ಮ ಉಸಿರು, ಹೆಸರು, ಕಸುಬು ಕನ್ನಡ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕ್ಷಣಗಳು.
6
72
591
7,621
ತಾಯಿ ನುಡಿ ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೧ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖ ಅಂಶಗಳು.
2
16
115
5,140
ತಾಯಿ ನುಡಿ ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೧ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖ ಅಂಶಗಳು.
2
2
14
1,109
ತಾಯಿ ನುಡಿ ಸೇವೆಗಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೧ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖ ಅಂಶಗಳು.
2
427
Truth has the strength of Lord Shiva, and no force can silence its voice! Shri @RahulGandhi is leading from the front in the fight to protect our democracy and every Indian's constitutional right to vote. From taking the concerns over SIR of electoral rolls to the Supreme Court to standing united with INDIA bloc leaders in yesterday's public impeachment proceedings against the Chief Election Commissioner Gyanesh Kumar, he has demonstrated unwavering courage and conviction in standing up for the people. The INDIA bloc will never back down from defending the Constitution, safeguarding democratic institutions and protecting the voice of every citizen. As we take this fight to the people through today's march and rally at Ramlila Maidan, New Delhi, our resolve remains firm. This is a fight for truth, justice and democracy. We will stand together, and we will stand firm. Satyam Shivam Sundaram! x.com/i/broadcasts/2zkzJVjrZ…
सत्यम् शिवम् सुन्दरम्
29
201
1,429
13,767
DK Shivakumar retweeted
LIVE: Vote Bachao, Desh Bachao Maha March | Connaught Place Minto Road Junction to Ramlila Maidan, New Delhi x.com/i/broadcasts/2zkzJVlEg…
62
480
1,159
47,627
DK Shivakumar retweeted
𝐓𝐡𝐞 𝐌𝐨𝐨𝐝 𝐎𝐟 𝐈𝐧𝐝𝐢𝐚 Vote Chor, Gaddi Chhod
138
1,007
6,012
127,791
Glad to welcome Hon’ble Union Minister for Culture and Tourism Shri Gajendra Singh Shekhawat to my residence today. It was a pleasure to receive his warm greetings on the occasion of Kannada Rajyotsava. We also had a cordial discussion on strengthening Karnataka’s cultural and tourism potential and matters of mutual interest.
11
26
500
16,783
ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ೭೧ನೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಕ್ಷಣಗಳು. ನಾಡಹಬ್ಬಕ್ಕೆ ನಿಜವಾದ ಕಳೆ ತಂದಿದ್ದು ಅಲ್ಲಿ ನೆರೆದಿದ್ದ ಮುದ್ದು ಮಕ್ಕಳ ಉತ್ಸಾಹ! ನಾಡಿನ ಭವಿಷ್ಯವಾಗಿರುವ ಈ ಮಕ್ಕಳ ಕೈಗಳಲ್ಲಿ ರಾರಾಜಿಸಿದ ಹಳದಿ-ಕೆಂಪು ಬಾವುಟ ಮತ್ತು ಅವರ ಮುಖದಲ್ಲಿದ್ದ ಕನ್ನಡದ ಹೆಮ್ಮೆ ನೋಡಲು ಎರಡು ಕಣ್ಣು ಸಾಲದು. ತಾಯಿ ಭುವನೇಶ್ವರಿಯ ಮಡಿಲಲ್ಲಿ ಅರಳಿದ ನಮ್ಮ ಭಾಷೆ, ನಮ್ಮ ನಾಡಿನ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯ ಪ್ರತೀಕ. ಹಳದಿ-ಕೆಂಪು ಬಾವುಟದ ನೆರಳಲ್ಲಿ ಕನ್ನಡಿಗರ ಒಗ್ಗಟ್ಟು, ಪ್ರೇಮ ಸದಾ ಬೆಳಗುತ್ತಿರಲಿ. ನಾಳಿನ ಹರಿಕಾರರಾದ ಈ ಮುದ್ದು ಮಕ್ಕಳ ಎದೆಯಲ್ಲೂ ಕನ್ನಡದ ದೀಪ ಎಂದೆಂದಿಗೂ ಬೆಳಗುತ್ತಿರಲಿ. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ! ಜೈ ಭುವನೇಶ್ವರಿ.
5
20
281
7,688
ಕನ್ನಡಿಗರ ಸಾಧನೆ, ಕರುನಾಡಿನ ಹಿರಿಮೆ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಎಂಟು ಕನ್ನಡಿಗರು ಪದಕ ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ವಿಚಾರ. ಚಿನ್ನದ ಪದಕ ವಿಜೇತರಿಗೆ ₹1 ಕೋಟಿ, ಬೆಳ್ಳಿ ಪದಕ ವಿಜೇತರಿಗೆ ₹75 ಲಕ್ಷ ಹಾಗೂ ಕಂಚಿನ ಪದಕ ವಿಜೇತರಿಗೆ ₹50 ಲಕ್ಷ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದ್ದೇವೆ. ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ 20 ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ಪ್ರೋತ್ಸಾಹಧನ ನೀಡಿದ್ದೇವೆ. ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ಕ್ರೀಡಾಪಟುಗಳಿಗೆ ತಲಾ ₹10 ಲಕ್ಷ ನೀಡುತ್ತಿದ್ದೇವೆ. ಸರ್ಕಾರಿ ನೌಕರಿಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಹಾಗೂ ಅರಣ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಶೇ.3ರಷ್ಟು ಮೀಸಲಾತಿ ಕಲ್ಪಿಸಿದ್ದೇವೆ. 'ಗುರಿ ಒಲಿಂಪಿಕ್ಸ್' ಯೋಜನೆಯನ್ನೂ ರೂಪಿಸಿದ್ದೇವೆ. ವಿದ್ಯಾರ್ಥಿಗಳು ಕ್ರೀಡೆ, ಓದು, ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಕೀರ್ತಿ ತರುವಂತಾಗಬೇಕು. ನಮ್ಮ ಸರ್ಕಾರ ನಿಮ್ಮ ಬೆನ್ನಿಗಿದೆ. ಯುವಜನರನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಿ, ಹೊಸ ಕರ್ನಾಟಕವನ್ನು ರೂಪಿಸಲು ಪಣ ತೊಟ್ಟಿದ್ದೇವೆ.
4
27
186
5,469
ಇಂದಿನ ಮಕ್ಕಳೇ ಕನ್ನಡದ ವಾರಸುದಾರರು ಕನ್ನಡ ಭಾಷೆಗೆ 2,000ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳ ಗರಿಮೆ ಇದೆ. ಪಂಪ, ರನ್ನ, ಜನ್ನ, ಕುಮಾರವ್ಯಾಸ, ಕನಕದಾಸರು, ಪುರಂದರದಾಸರು, ಸರ್ವಜ್ಞರು, ಬಸವಣ್ಣನವರು ಜನಿಸಿದ ನಾಡು ನಮ್ಮದು. ಡಿವಿಜಿ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತರು, ಗೋಕಾಕ್, ಯು.ಆರ್.ಅನಂತಮೂರ್ತಿ, ತೇಜಸ್ವಿ, ಸಿದ್ದಲಿಂಗಯ್ಯ, ನಿಸಾರ್ ಅಹಮದ್, ಚಂದ್ರಶೇಖರ ಕಂಬಾರ ಅವರಂತಹ ದಿಗ್ಗಜ ಸಾಹಿತಿಗಳನ್ನು ನೀಡಿದ ಶ್ರೀಮಂತ ಭಾಷೆ ನಮ್ಮ ಕನ್ನಡ. ಮಕ್ಕಳೇ... ನೀವೇ ಕನ್ನಡ ಭಾಷೆಯ ರಾಯಭಾರಿಗಳು. ಕನ್ನಡ ಎನ್ನುವುದು ಅಮೂಲ್ಯ ಆಭರಣವಿದ್ದಂತೆ. ಆ ಆಭರಣವನ್ನು ನಿಮ್ಮ ಕೈಯಲ್ಲಿ ಇಟ್ಟಿದ್ದೇವೆ. ಅದರ ಹೊಳಪು ಕಳೆಯದಂತೆ ಕಾಪಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಕನ್ನಡವನ್ನು ಪ್ರೀತಿಸಿ, ಬೆಳೆಸಿ, ಉಳಿಸಿ; ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಹಸ್ತಾಂತರಿಸಿ.
3
22
163
4,250
ಸರ್ಕಾರಿ ಶಾಲೆಗಳೇ ಕನ್ನಡದ ಬೇರು, ವಿದ್ಯಾರ್ಥಿಗಳೇ ಕನ್ನಡದ ಭವಿಷ್ಯ ನಮ್ಮ ಸರ್ಕಾರಿ ಶಾಲೆಗಳು ಪ್ರತಿಭೆಯ ಗಣಿಗಳು. ಕನ್ನಡ ಭಾಷೆಯ ನಿಜವಾದ ಬೇರುಗಳಿರುವುದು ಸರ್ಕಾರಿ ಶಾಲೆಗಳಲ್ಲಿ. ಕಳೆದ ಮೂರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಮೊದಲ ಸ್ಥಾನ ಗಳಿಸುತ್ತಿದ್ದಾರೆ. ಕನ್ನಡದ ಅಳಿವು, ಉಳಿವು ನಮ್ಮ ವಿದ್ಯಾರ್ಥಿಗಳ ಕೈಯಲ್ಲಿದೆ. 6ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (ಎಐ) ತರಬೇತಿ ನೀಡಲು ಮುಂದಾಗಿದ್ದೇವೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಸಿಎಸ್‌ಆರ್ ನಿಧಿ ಬಳಸಿ, ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಹೊಸ ರೂಪ ನೀಡುತ್ತಿದ್ದೇವೆ. 15 ಸಾವಿರ ಶಾಲಾ ಶಿಕ್ಷಕರ ನೇಮಕಕ್ಕೆ ಆದೇಶ ಮಾಡಿದ್ದೇವೆ. ರಾಜ್ಯದಲ್ಲಿ ಒಟ್ಟು 25,498 ದ್ವಿಭಾಷಾ ಶಾಲೆಗಳನ್ನು ಪ್ರಾರಂಭಿಸಲಾಗಿದೆ. 250 ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಿದ್ದೇವೆ. 6ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ಪ್ರಾರಂಭಿಸಿದ್ದೇವೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಅರ್ಹ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಸೀಟುಗಳಲ್ಲಿ ಶೇ.7.5ರಷ್ಟು ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ. ಈ ಮೂಲಕ ಗ್ರಾಮೀಣ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಉನ್ನತ ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸಿ, ಅವರ ಪ್ರತಿಭೆಗೆ ಸಮಾನ ಅವಕಾಶ ಕಲ್ಪಿಸಲಾಗುತ್ತಿದೆ. 'ಗ್ರಾಮಾನುಭವ' ವಿದ್ಯಾರ್ಥಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವಾಗಿದೆ. ಬೆಂಗಳೂರು ಮತ್ತು 10 ಮಹಾನಗರ ಪಾಲಿಕೆಗಳ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಒಂದು ದಿನದ ಗ್ರಾಮ ವಾಸ್ತವ್ಯ ಕಲ್ಪಿಸುವ ಈ ಯೋಜನೆಯ ಎರಡನೇ ಹಂತದಲ್ಲಿ ಸರ್ಕಾರಿ ಶಾಲೆಗಳ 2,500 ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ನಡೆಸಲಾಗುವುದು. ಖಾಸಗಿ ಶಾಲೆಗಳು ತಮ್ಮ ಸ್ವಂತ ವೆಚ್ಚದಲ್ಲಿ ಈ ಕಾರ್ಯಕ್ರಮ ನಡೆಸುವಂತೆ ತಿಳಿಸಲಾಗಿದೆ. ವಿದ್ಯಾರ್ಥಿಗಳನ್ನು ತರಗತಿ ಕೊಠಡಿಯ ಕಲಿಕೆಯಿಂದ ಹೊರತಂದು ಹಳ್ಳಿಯ ನೈಜ ಬದುಕು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣ ಜೀವನೋಪಾಯ ಮತ್ತು ಸಂಸ್ಕೃತಿಯೊಂದಿಗೆ ಪರಿಚಯಿಸುವುದು ಇದರ ಉದ್ದೇಶ. ರೈತರು ಮತ್ತು ಶ್ರಮಿಕರ ದುಡಿಮೆಯ ಗೌರವವನ್ನು ತಿಳಿಸುವುದರ ಜೊತೆಗೆ ಗ್ರಾಮ–ನಗರಗಳ ಪರಸ್ಪರ ಅವಲಂಬನೆ, ಸುಸ್ಥಿರ ಜೀವನದ ಮಹತ್ವ ಹಾಗೂ ಗ್ರಾಮಗಳ ಅಮೂಲ್ಯ ಕೊಡುಗೆಯ ಬಗ್ಗೆ ಅರಿವು ಮೂಡಿಸುವುದು ಗ್ರಾಮಾನುಭವದ ಪ್ರಮುಖ ಗುರಿಯಾಗಿದೆ.
7
23
178
6,596