ಸಮುದಾಯದ ಪರವಾಗಿ ಸದಾ ಗಟ್ಟಿಯಾಗಿ ನಿಲ್ಲುವ, ಶರಣ ಚಿಂತನೆಗಳಲ್ಲಿ ನಂಬಿಕೆ ಇಟ್ಟುಕೊಂಡಿರುವ, ಅಗತ್ಯವಿದ್ದಾಗ ಸಮುದಾಯದ ಧ್ವನಿಯಾಗಿ ಸಚಿವ ಸಂಪುಟದಲ್ಲಿ ಘರ್ಜಿಸುವ, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವ ಶರಣ ಸಚಿವ ಶ್ರೀ ಎಂ.ಬಿ. ಪಾಟೀಲರಿಗೆ ಹೃತ್ಪೂರ್ವಕ ಹುಟ್ಟುಹಬ್ಬದ ಶುಭಾಶಯಗಳು. 💐💐
ನಿಮ್ಮ ಅಭಿವೃದ್ಧಿಪರ ಹಾಗೂ ದೂರದೃಷ್ಟಿಯ ಕಾರ್ಯಗಳಿಂದ ರಾಜ್ಯದ ಪ್ರಜ್ಞಾವಂತ ಜನರು ನೀವು ಈ ನಾಡಿನ ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಬಯಸುತ್ತಿದ್ದಾರೆ.
ಈ ಜನರ ಬಯಕೆ ಆದಷ್ಟು ಬೇಗ ಈಡೇರಲಿ ಎಂದು ಜಗದ್ಗುರು ಶ್ರೀ ರೇಣುಕಾಚಾರ್ಯರು ಹಾಗೂ ಬಸವಾದಿ ಶರಣರರಲ್ಲಿ ಪ್ರಾರ್ಥಿಸುತ್ತೇವೆ.
ತಮಗೆ ಸದಾ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆಯ ಅವಕಾಶ ದೊರೆಯಲಿ ಎಂದು ಹಾರೈಸುತ್ತೇವೆ.
@MBPatil@MBPatilbrige#MBP#Birthday#Karnataka#Kannada
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ಮಾಜಿ ಸಚಿವ ಡಾ. ಮುರುಗೇಶ್ ಆರ್. ನಿರಾಣಿ ಹಾಗೂ ಪರಣ್ಣ ಈಶ್ವರಪ್ಪ ಮನವಳ್ಳಿ ಅವರು ನೇಮಕಗೊಂಡಿರುವುದು ಸಂತಸದ ಸಂಗತಿ.
ನೂತನ ರಾಜ್ಯ ಉಪಾಧ್ಯಕ್ಷರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು. 💐💐
ವೀರಶೈವ ಲಿಂಗಾಯತ ಸಮಾಜದ ಸಂಘಟನೆ, ಅಭಿವೃದ್ಧಿ ಹಾಗೂ ಏಳಿಗೆಗಾಗಿ ತಮ್ಮ ಸೇವೆ ಮತ್ತಷ್ಟು ಪರಿಣಾಮಕಾರಿಯಾಗಲಿ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ.
@NiraniMurugesh
ಬೆಂಗಳೂರು ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಸವಾದಿ ಶರಣರು ಕಲ್ಯಾಣದಿಂದ ಉಳವಿಗೆ ತೆರಳುವ ಸಂದರ್ಭದಲ್ಲಿ ತಂಗಿದ್ದ ಐತಿಹಾಸಿಕ ಮುರುಸಾವಿರ ಮಠದ ಕುರಿತು ವ್ಯಂಗ್ಯವಾಡಿದಾಗ, ಹಾಗೆಯೇ “ನೀವೆಲ್ಲ ನನ್ನ ರಾಯಭಾರಿಗಳಾಗಿ ಸೇವೆ ಮಾಡಿ ಮುಕ್ತಿ ಪಡೆಯಿರಿ” ಎಂದು ಹೇಳಿದಾಗ, ಅದಕ್ಕೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸದೆ ಚಪ್ಪಾಳೆ ತಟ್ಟಿ ಒಂದು ರೀತಿಯಲ್ಲಿ ಸಹಮತಿ ಸೂಚಿಸಿದ ವೇದಿಕೆಯಲ್ಲಿದ್ದ ಪಂಚಪೀಠಾಧೀಶರು ಸೇರಿದಂತೆ ಎಲ್ಲ ಸಮಾಜಗಳ ಸ್ವಾಮೀಜಿಗಳು, ಧೀರೋದಾತ್ತವಾಗಿ ಭಾಷಣ ಮಾಡುವ ಸಚಿವ ಈಶ್ವರ ಖಂಡ್ರೆ ಹಾಗೂ ವಿಜಯಾನಂದ ಕಾಶಪ್ಪನವರ್ ನಮ್ಮ ಧರ್ಮದ ಮರ್ಯಾದೆಯನ್ನು ಮೂರು ಕಾಸಿಗೆ ಮಾರಿದ್ದಾರೆ ಎಂಬ ಭಾವನೆ ಮೂಡಿಸಿದೆ.
ಒಬ್ಬ ದಲಿತ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತ್ರ ಈ ಹೇಳಿಕೆಯನ್ನು ಖಂಡಿಸಿದರು. ಆದರೆ, ಅಲ್ಲಿ ಉತ್ತರ ನೀಡಬೇಕಾದವರು ಮೌನವಾಗಿದ್ದು, ಬದಲಾಗಿ ಚಪ್ಪಾಳೆ ತಟ್ಟಿದ್ದು ನಿಜಕ್ಕೂ ವಿಷಾದನೀಯ.
ಇದೇ ರೀತಿ ಬೇರೆ ಸಮುದಾಯದ ಕುರಿತು ಹೇಳಿಕೆ ನೀಡಿದ್ದರೆ, ಆ ಸಮುದಾಯದ ನಾಯಕರು ಅದಕ್ಕೆ ತಕ್ಕ ಉತ್ತರ ನೀಡುತ್ತಿದ್ದರು. ಆದರೆ, ನಮ್ಮ ಸಮುದಾಯದ ಧಾರ್ಮಿಕ ಹಾಗೂ ಐತಿಹಾಸಿಕ ವಿಚಾರಗಳ ಕುರಿತು ಅವಹೇಳನಕಾರಿ ಅಥವಾ ವ್ಯಂಗ್ಯಾತ್ಮಕ ಹೇಳಿಕೆಗಳು ಬಂದಾಗಲೂ, ಅದನ್ನು ಪ್ರಶ್ನಿಸದೆ ಚಪ್ಪಾಳೆ ತಟ್ಟುವುದು ನಮ್ಮ ಧರ್ಮದ ದುರ್ದೈವ.
ಧರ್ಮದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ನಮ್ಮ ಧರ್ಮದ ಇತಿಹಾಸ, ಪರಂಪರೆ, ಶರಣರ ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾದಾಗ, ಅದನ್ನು ಪಕ್ಷಾತೀತವಾಗಿ ಪ್ರಶ್ನಿಸುವ ಧೈರ್ಯ ನಮ್ಮ ಧಾರ್ಮಿಕ ಹಾಗೂ ರಾಜಕೀಯ ನಾಯಕರಲ್ಲಿ ಇರಬೇಕು.
ಇದು ಯಾರೊಬ್ಬ ವ್ಯಕ್ತಿಯ ವಿರುದ್ಧದ ವೈಯಕ್ತಿಕ ವಿರೋಧವಲ್ಲ; ನಮ್ಮ ಧರ್ಮದ ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆ.
@eshwar_khandre@VVKashappanavar@V_Kashappanavar@NswamyChalavadi@VSOMANNA_BJP@BYVijayendra@BSBommai@BelladArvind@MBPatil@AsianetNewsSN@tv9kannada@publictvnews@News18Kannada@DKShivakumar@INCKarnataka@BJP4Karnataka@BasanagoudaBJP
'ವಾರ್ತಾ ಭಾರತಿ' ಅಲ್ಲ ಇದು 'ವಾಂತಿ ಭಾರತಿ' ಪತ್ರಿಕೆ.
ತನ್ನ ಹೊಲಸು ಹಾಗೂ ಮತೀಯ ವಿಕೃತಿ ಮನಸ್ಥಿತಿಯನ್ನು ತೋರ್ಪಡಿಸಲು ಪತ್ರಿಕೋದ್ಯಮವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ 'ವ್ಯಾಧಿ ಭಾರತಿ'.
ಇವನು ಯಾರೋ ರಾಜಶೇಖರ ಹತಗುಂದಿ ನಮ್ಮಗೆ ಗೊತ್ತಿಲ್ಲ. ಆದರೆ ಇವನ ಮುಖಾಂತರ ನಿನ್ನ ಮನದ ವಿಕೃತಿಯನ್ನು ತೆರೆದು ಇಟ್ಟಿರುವ ಬಿ. ಎಂ. ಬಶೀರ್. (ಪತ್ರಿಕೆಯ ಮುಖ್ಯಸ್ಥ) ನಿನಗೆ ನಮ್ಮ ನೇರ ಪ್ರಶ್ನೆಗಳು.
1.ದಸರಾ ಉದ್ಘಾಟನೆಗೆ ವಯಸ್ಸಲ್ಲಿ ಹಿರಿಯರನ್ನು ಆಯ್ಕೆ ಮಾಡಬೇಕು ಎನ್ನುವ ನಿನಗೆ, ನಿನ್ನ ಪತ್ರಿಕೆಯಲ್ಲಿ ಉಪಸಂಪಾದಕರು, ವರದಿಗಾರರು ಸೇರಿದಂತೆ ಅದೆಷ್ಟು ಜನ ನಿನಗಿಂತ ವಯಸ್ಸಲ್ಲಿ ಹಿರಿಯರಿಲ್ಲ? ಅವರನ್ನು ಬಿಟ್ಟು ನೀನ್ಯಾಕೆ ಸುದ್ದಿ ಸಂಪಾದಕ ಆಗಿರುವೆ?
2.ಶ್ರೀಗಳು ಜಾತಿ, ಧರ್ಮ ಭೇದಭಾವವಿಲ್ಲದೆ ಸಾವಿರಾರು ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ವಸತಿ ನೀಡುತ್ತಿರುವುದು ನಿನ್ನ ಕಣ್ಣಿಗೆ ಕಾಣುದಿಲ್ಲವೇ?
3.ಸರ್ಕಾರಿ ಕಚೇರಿ ಒಂದರಲ್ಲಿ ಕಿರಿಯ ವಯಸ್ಸಿನ ಮೇಲಧಿಕಾರಿಗಳ ಸೂಚನೆಯನ್ನು ಹಿರಿಯ ವಯಸ್ಸಿನ ಕೆಳದರ್ಜೆ ಅಧಿಕಾರಿಗಳು ಪಾಲಿಸುವುದು ತಪ್ಪೇ? ನಿನ್ನ ಪ್ರಕಾರ ವಿದ್ವತ್ ಅಥವಾ ಸಾಧನೆಗಿಂತ ವಯಸ್ಸೇ ಮುಖ್ಯವೇ?
@varthabharati@BasheerBM6@DKShivakumar@utkhader@MBPatil@eshwar_khandre@BasanagoudaBJP@BSBommai@BelladArvind@BYVijayendra@INCIndia@INCKarnataka@VSOMANNA_BJP@BJP4Karnataka@KannadaPrabha@tv9kannada@publictvnews@AsianetNewsSN@Guarantee_News@prajavani
ಬೆಳಕಿನ ಹಬ್ಬ, ಭಕ್ತಿಯ ಉತ್ಸವ, ಕರುನಾಡಿನ ಸಾಂಸ್ಕೃತಿಕ ಕಿರೀಟ ನಮ್ಮ ಮೈಸೂರು ದಸರಾ. ಚಿನ್ನದ ಅಂಬಾರಿಯ ಗಾಂಭೀರ್ಯ ಹಾಗೂ ಅರಮನೆಯ ಝಗಮಗಿಸುವ ದೀಪಗಳ ನಡುವೆ, ತಾಯಿ ಚಾಮುಂಡೇಶ್ವರಿಯ ವೈಭವವನ್ನು ಕಣ್ತುಂಬಿಕೊಳ್ಳುವ ಸಮಯವೇ ನಮ್ಮ ಮೈಸೂರು ದಸರಾ.
ಈ ಬಾರಿಯ ನಾಡಹಬ್ಬ ಮೈಸೂರು ದಸರಾ 2026 ಅನ್ನು ಜ್ಞಾನ ಮತ್ತು ದಾಸೋಹದ ಕಾಯಕಯೋಗಿ, ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ.
ಸಂತರು ಮತ್ತು ಸಂಸ್ಕೃತಿಯ ಈ ಅಪೂರ್ವ ಮಿಲನ ನಮ್ಮ ನಾಡಿನ ಪರಂಪರೆಯನ್ನು ಮತ್ತಷ್ಟು ಬೆಳಗಲಿದೆ. ನಾಡಿನೆಲ್ಲೆಡೆ ಭಕ್ತಿ, ಸಡಗರದ ಹೊನಲು ಹರಿಯಲಿ, ದಸರಾ ಸಂಭ್ರಮ ಮನೆಮನಗಳಲ್ಲಿ ನಲಿಯಲಿ.
#MysuruDasara2026
ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಪರಮಪೂಜ್ಯ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ!
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಕೊಪ್ಪಳದ ಪರಮಪೂಜ್ಯ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಸಂಗತಿ.
ಮಠದ ಸೀಮೆಯನ್ನು ಮೀರಿ ಸಮಾಜದ ಎಲ್ಲ ವರ್ಗಗಳಿಗೂ ಜ್ಞಾನ, ಅನ್ನ ಹಾಗೂ ಮಾನವೀಯತೆಯ ಬೆಳಕು ನೀಡುತ್ತಿರುವ ಪೂಜ್ಯರ ಸಮಾಜಮುಖಿ ಕಾಯಕ ನಿಜಕ್ಕೂ ಶ್ಲಾಘನೀಯ.
ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಸೌಹಾರ್ದತೆಯ ಪ್ರತೀಕವಾಗಿರುವ ಮೈಸೂರು ದಸರಾವನ್ನು ಇಂತಹ ಸಮಾಜಮುಖಿ, ಕಾಯಕಯೋಗಿ ಸಂತರು ಉದ್ಘಾಟಿಸುತ್ತಿರುವುದು ಈ ಬಾರಿಯ ದಸರಾ ಸಂಭ್ರಮಕ್ಕೆ ಮತ್ತಷ್ಟು ಅರ್ಥ ಹಾಗೂ ಗೌರವವನ್ನು ತಂದಿದೆ.
ಪೂಜ್ಯರ ಆಧ್ಯಾತ್ಮಿಕ ಚಿಂತನೆ, ಸಮಾಜಮುಖಿ ಸೇವೆ ಹಾಗೂ ಮಾನವೀಯ ಮೌಲ್ಯಗಳು ನಾಡಿನ ಜನತೆಗೆ ಸದಾ ದಾರಿದೀಪವಾಗಲಿ.
ಪರಮಪೂಜ್ಯ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಭಕ್ತಿಪೂರ್ವಕ ಶುಭಾಶಯಗಳು.
#ಮೈಸೂರುದಸರಾ
ನಾಡಹಬ್ಬ ಮೈಸೂರು ದಸರಾ 2026ರ ಉದ್ಘಾಟನೆಯನ್ನು ಜ್ಞಾನ ಮತ್ತು ದಾಸೋಹದ ಕಾಯಕಯೋಗಿ, ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ನೆರವೇರಿಸಲಿರುವುದು ನಾಡಿನ ಜನತೆಗೆ ಹೆಮ್ಮೆಯ ಹಾಗೂ ಸಂತಸದ ಕ್ಷಣ.
ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರಾಗಿ ನೇಮಕಗೊಂಡ ಶರಣ ಶ್ರೀ ವೈ ಎಸ್ ಪಾಟೀಲರವರಿಗೆ ಅಭಿನೆಂದನೆಗಳು.💐💐
ಶ್ರೀ ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಾದಿ ಶರಣರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇವೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹರಳೆ ಗ್ರಾಮದಲ್ಲಿರುವ ಸಮಗಾರ ಹರಳಯ್ಯನವರ ಸಮಾಧಿಗೆ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿಗಳಾದ ಡಾ. ಮಹಾಂತೇಶ ಬಿರಾದಾರ ಅವರು ಹಾಗೂ ಅವರ ಗೆಳೆಯರ ಬಳಗ ಭೇಟಿ ನೀಡಿ ಗೌರವ ನಮನ ಸಲ್ಲಿಸಿದ ಸಂದರ್ಭ.
ಶರಣರ ಚಿಂತನೆಗಳು, ವಚನಗಳ ಮೌಲ್ಯಗಳು ಹಾಗೂ ಸಮಾನತೆಯ ಸಂದೇಶ ಸದಾ ಪ್ರೇರಣೆಯಾಗಲಿ.
ಶರಣರ ಚರಿತ್ರೆ ಮತ್ತು ಸಮಾನತೆಯ ಸಂದೇಶವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಪವಿತ್ರ ಸ್ಥಳದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು.
@MBPatil@DKShivakumar@CMofKarnataka@MantheshBiradar@mepratap@yaduveerwadiyar@siddaramaiah@MysuruMemes