ಕೇವಲ 6 ದಿನ ಊರು ಬಿಟ್ಟು ಇದ್ದದ್ದಕ್ಕೇ ನೋವಾಗುತ್ತಿದೆ ಅಂತ ಹೇಳ್ತಿರೋ ಮಾನ್ಯ ಮುಖ್ಯಮಂತ್ರಿಗಳೇ, ನಮ್ಮ ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕದ ಯುವಕರು ಪಡ್ತಿರೋ ಕಷ್ಟವನ್ನೂ ಒಮ್ಮೆ ಅರ್ಥ ಮಾಡಿಕೊಳ್ಳಿ.
ಇಲ್ಲಿನ ಎಷ್ಟೋ ಯುವಕರು ಕೆಲಸಕ್ಕಾಗಿ ತಮ್ಮ ಮನೆ, ತಂದೆ-ತಾಯಿ, ಹೆಂಡತಿ-ಮಕ್ಕಳನ್ನೆಲ್ಲ ಬಿಟ್ಟು ಬೆಂಗಳೂರಿಗೆ ಹೋಗಿ ವರ್ಷಗಟ್ಟಲೆ ದುಡಿಯುತ್ತಿದ್ದಾರೆ. ಹಬ್ಬ ಇರಲಿ, ಮನೆಲಿ ಯಾವುದಾದರೂ ಕಾರ್ಯಕ್ರಮ ಇರಲಿ… ಎಲ್ಲದಕ್ಕೂ ಊರಿಗೆ ಬರೋಕೆ ಆಗಲ್ಲ. ಕುಟುಂಬದವರನ್ನ ಬಿಟ್ಟು ದೂರದ ಊರಲ್ಲಿ ದುಡಿಯೋದು ಎಷ್ಟು ಕಷ್ಟ ಅನ್ನೋದು ಅವರಿಗೇ ಗೊತ್ತು.
ನಮ್ಮ ಯುವಕರು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಲೇಬೇಕು ಅನ್ನೋ ಪರಿಸ್ಥಿತಿ ಬದಲಾಗಬೇಕು.
ಕಲಬುರಗಿ ಯುವಕರಿಗೆ ಕಲಬುರಗಿಯಲ್ಲೇ ಒಳ್ಳೆಯ ಉದ್ಯೋಗ ಸಿಗುವಂತೆ ಮಾಡಿ. ಇಲ್ಲೇ ಕೆಲಸ, ಇಲ್ಲೇ ಬದುಕು, ಇಲ್ಲೇ ಭವಿಷ್ಯ ಕಟ್ಟಿಕೊಳ್ಳೋ ಅವಕಾಶ ಕೊಡಿ.
ಭಾವನೆ ಬಗ್ಗೆ ಮಾತನಾಡೋ ನೀವು ನಮ್ಮ ಯುವಕರ ನೋವನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳಿ ಮುಖ್ಯಮಂತ್ರಿಗಳೇ.
@KalyanaKarnata @NammaKalyana @Kalaburgi_Times @nammakalburagi1